ಈ ಸಾಲಿನ ಐಪಿಎಲ್ನಲ್ಲಿ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಇನ್ನೂ ಹಲವು ಪ್ರತಿಭೆಗಳು ಅತ್ಯುತ್ತಮ ಆಟದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿವೆ. ಇನ್ನೂ 20 ವರ್ಷವೂ ಆಗದ ಆಟಗಾರರು ದಿಗ್ಗಜರೇ ಮೆಚ್ಚುವಂತೆ ಆಟವನ್ನಾಡಿ ಚಿತ್ತ ಸೂರೆಗೊಂಡಿದ್ದಾಾರೆ. ಇದರ ನಡುವೆಯೇ ಐಪಿಎಲ್ಗೂ ಮೊದಲು ಸಾಕಷ್ಟು ಸದ್ದು ಮಾಡಿದ್ದ ಆಟಗಾರರು ಟುಸ್ ಪಟಾಕಿಗಳಾಗಿದ್ದಾಾರೆ. ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ವಿಲರಾಗಿದ್ದಾರೆ.
ಯುವರಾಜ್ ಸಿಂಗ್
ಈ ಐಪಿಎಲ್ನಲ್ಲಿ ಸದ್ದು ಮಾಡಲು ವಿಲರಾದ ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರೇ ಯುವರಾಜ್ ಸಿಂಗ್. 2011ರ ವಿಶ್ವಕಪ್ ಹೀರೋ ಎಂದೇ ಬಣ್ಣಿಸಲ್ಪಡುವ ಟಿ20 ಸ್ಪೆಷಲಿಸ್ಟ್, ಸಿಕ್ಸರ್ಗಳ ಸರದಾರ ಈ ಐಪಿಎಲ್ನಲ್ಲಿ ಪ್ರಭಾವಿ ಎನ್ನಿಸಲೇ ಇಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಯುವಿ ತಾನಾಡಿದ ಏಳು ಪಂದ್ಯಗಳ ಐದು ಇನ್ನಿಂಗ್ಸ್ಗಳಲ್ಲಿ ಭಾರಿಸಿದ ರನ್ ಕೇವಲ 64. ಗರಿಷ್ಠ ಮೊತ್ತ 20. ಸರಾಸರಿ 12.80.
ಆರೋನ್ ಫಿಂಚ್.
ಪಂಜಾಬ್ ತಂಡದ ಇನ್ನೋರ್ವ ಆಟಗಾರ ಆರೋನ್ ಫಿಂಚ್ ಕೂಡ ಈ ಸಾರಿ ಟುಸ್ ಪಟಾಕಿಯಾಗಿದ್ದಾಾರೆ. ಮದುವೆ ಮುಗಿಸಿ ಸೀದಾ ಐಪಿಎಲ್ ಅಂಗಳಕ್ಕೆ ಕಾಲಿರಿಸಿದ್ದ ಫಿಂಚ್ ಒಂದೇ ಒಂದು ಪಂದ್ಯದಲ್ಲೂ ಮಿಂಚಿಲ್ಲ. ಫಿಂಚ್ ಗಳಿಗೆ 7 ಪಂದ್ಯಗಳ 6 ಇನ್ನಿಂಗ್ಸ್ಗಳಲ್ಲಿ 58ರನ್. ಗರಿಷ್ಠ 34. ಸರಾಸರಿ 11.60.
ಗೌತಮ್ ಗಂಭೀರ್
ಒಂದಾನೊಂದು ಕಾಲದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಆಗಿದ್ದ ಗೌತಮ್ ಗಂಭೀರ್ಗೆ ಈ ಐಪಿಎಲ್ನಲ್ಲಿ ದುರದೃಷ್ಟ ವಕ್ಕರಿಸಿದಂತಿದೆ. ಮೊದಲು ಬ್ಯಾಟಿಂಗ್ನಲ್ಲಿ ವಿಫಲ, ಆಮೇಲೆ ತಂಡಕ್ಕೆ ಸಾಲುಸಾಲು ಸೋಲು. ಬೆನ್ನಲ್ಲೇ ನಾಯಕತ್ವಕ್ಕೆ ರಾಜೀನಾಮೆ. ಅಷ್ಟಲ್ಲದೇ ಪಂದ್ಯಗಳಿಂದಲೂ ಹೊರಗುಳಿಯುವಂತಹ ಪರಿಸ್ಥಿತಿ. ಗಂಭೀರ್ ಈ ಋತುವಿನಲ್ಲಿ ಆಡಿದ್ದು 6 ಪಂದ್ಯಗಳು. ಅದರಲ್ಲಿ 5 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಮಾಡಿದ ಗಂಭೀರ್ ಭಾರಿಸಿದ್ದು 85 ರನ್. ಗರಿಷ್ಠ 55. ಸರಾಸರಿ 17.
ಕೀರನ್ ಪೊಲಾರ್ಡ್
ಟಿ20 ಸ್ಪೆಷಲಿಸ್ಟ್ , ವಿಂಡೀಸ್ ದೈತ್ಯ ಈ ಋತುವಿನಲ್ಲಿ ಆಡಿದ್ದು 7 ಪಂದ್ಯ. ಅದರಲ್ಲಿ 6 ಇನ್ನಿಂಗ್ಸ್ಗಳಲ್ಲಿ ಭಾರಿಸಿದ ರನ್ 76. ಗರಿಷ್ಠ 28. ಸರಾಸರಿ 15.20. ಮುಂಬಯಿ ತಂಡದ ಖಾಯಂ ಆಟಗಾರರಲ್ಲಿ ಒಬ್ಬ ಎಂದೇ ಬಿಂಬಿಸಲ್ಪಟ್ಟಿದ್ದ ಪೊಲಾರ್ಡ್ ಈ ಸಾರಿ ಬೌಲಿಂಗ್ನಲ್ಲೂ ವಿಫಲ. ಈ ಕಾರಣದಿಂದಲೇ ತಂಡದ ಮ್ಯಾನೇಜ್ಮೆಂಟ್ ಪೊಲಾರ್ಡ್ರನ್ನು ಹೊರಕ್ಕೆ ಕೂರಿಸಿದೆ.
ಸರ್ರಾಜ್ ಖಾನ್
ಆರ್ಸಿಬಿ ಈ ಋತುವಿನಲ್ಲಿ ರೀಟೇನ್ ಮಾಡಿಕೊಂಡ ಆಟಗಾರ ಸರ್ರಾಜ್ ಖಾನ್. ಆದರೆ ರೀಟೇನ್ಗೆ ತಕ್ಕಂತೆ ಆಟವಾಡಲು ವಿಲನಾಗಿರುವ ಸರ್ರಾಜ್ ಖಾನ್ ಫೈಲ್ಯೂರ್ ಸ್ಟಾರ್ ಎಂದೇ ಕುಖ್ಯಾತಿ ಪಡೆದಿದ್ದಾನೆ. ಆಡಿದ 4 ಪಂದ್ಯಗಳಲ್ಲಿ ಭಾರಿಸಿದ್ದು 22 ರನ್. ಗರಿಷ್ಠ 11. ಸರಾಸರಿ 5.50. ವಿಚಿತ್ರ ಎಂದರೆ ಆರ್ಸಿಬಿಯ ಎಷ್ಟೋ ಬೌಲರ್ಗಳು ಸರ್ರಾಜ್ ಖಾನ್ಗಿಂತ ಹೆಚ್ಚಿನ ರನ್ ಹೊಡೆದಿದ್ದಾರೆ. ಆದರೆ ಆರ್ಸಿಬಿ ಮಾತ್ರ ಈತನ ಮೇಲೆ ಇನ್ನೂ ನಂಬಿಕೆ ಇಟ್ಟಂತಿದೆ.
ವೃದ್ದಿಮಾನ್ ಸಾಹ
ಭಾರತದ ಟೆಸ್ಟ್ ತಂಡದ ಖಾಯಂ ಆಟಗಾರ. ಅತ್ಯಂತ ವೇಗದ ಶತಕ ಭಾರಿಸಿ ದಾಖಲೆ ನಿರ್ಮಿಸಿದಾತ. ಹೈದರಾಬಾದ್ ತಂಡದ ಈ ಆಟಗಾರ ಐಪಿಎಲ್ನ ಈ ಋತುವಿನಲ್ಲಿ ಸಂಪೂರ್ಣ ಟುಸ್ ಪಟಾಕಿ. ಆಡಿದ್ದು 10 ಪಂದ್ಯಘಿ. ಬ್ಯಾಟಿಂಗ್ ಸಿಕ್ಕಿದ್ದು 9 ಪಂದ್ಯದಲ್ಲಿ. ಗಳಿಸಿದ ರನ್ 87. ಗರಿಷ್ಠ 24. ಸರಾಸರಿ 12.42. ಕೀಪಿಂಗ್ ಮಾಡುತ್ತಾಾರೆ ಎನ್ನುವುದಷ್ಟೇ ಸಾಹಾ ಪಾಲಿಗೆ ಸ‘್ಯಕ್ಕಿಿರುವ ಪ್ಲಸ್ ಪಾಯಿಂಟ್