Sunday, March 14, 2010

Yugaadi ...

ಯುಗ ಯುಗಾದಿ ಕಳೆದರು...
ಯುಗಾದಿ ಮರಳಿ ಬರುತಿದೆ...
ನವ ವಸಂತದ ಸಂತಸದ ಯುಗಾದಿ ಮತ್ತೆ ಬಂದಿದೆ..
ನಿಮಗೆಲ್ಲರಿಗೂ ಯುಗಾದಿಯ ಶುಭಾಶಯಗಳು...

ಜೀವನದಲ್ಲಿ ಸಿಹಿ-ಕಹಿ ಎರಡು ಸಮನಾಗಿ ಇರಬೇಕು ಎಂಬ ತತ್ವ ಸಾರುವ ಯುಗಾದಿ ಮನುಷ್ಯನ ಬದುಕಿನ ಪ್ರಪುಲ್ಲತೆಯ ಸಂಕೇತ...
ಈ ದಿನದ ನೆನಪಿನಲ್ಲಿ ಬದುಕಿನಲ್ಲಿ ಹೊಸ ಹೆಜ್ಜೆ ಇಡೋಣ ಬನ್ನಿ...

ಈ ಖುಷಿ ಗೆ ಒಂದು ಹನಿ ಚುಟುಕ...


8) ಯುಗಾದಿ..

ಯುಗಾದಿ ಎಂದ ಕೂಡಲೇ
ನನಗೆ ನೆನಪಾಗುವುದು 
you ಮತ್ತು ಗಾದಿ...!!!

ಮತ್ತೆ ಸಿಗೋಣ...
ಮತ್ತಸ್ಟು ಹೊಸ ಹುರುಪಿನ ಜೊತೆಗೆ...

Thursday, February 4, 2010

ಕೆಲವು ಹನಿ ಚುಟುಕಗಳು...

 ಇವು ಅಪರೂಪಕ್ಕೆ ಬರೆದ ಹನಿಗಳು..
 ಸುಮ್ಮನೆ ನಿಮ್ಮ ಮುಂದೆ...

6) ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ ಭಾವನೆಗಳು
ಹೊರ ಹೋಗುವ ಒಂದು
way...!!!


7) ತಾಳಿ..

ಹರೆಯಕ್ಕೆ.,
ಯವ್ವನದೊದಲಿಗೆ
ಸಿಕ್ಕ ಒಂದು ಕಡಿವಾಣ ..
ಗಂಡಿನ ಲಗಾಮು..!!

Thursday, November 26, 2009

ಎರಡು ಚಿಕ್ಕ ಚುಟುಕ

ಒಂದು ಚಿಕ್ಕ ಚುಟುಕ ಬರೆದಿದ್ದೇನೆ .. ಹೀಗೆ ಸುಮ್ಮನೆ ನಿಮ್ಮ ಮುಂದೆ ಇಡುತ್ತಿದ್ದೇನೆ..
ಅದು ಅರ್ಥ ಆಗದೆ ಇದ್ರೆ ನಾನು ಹೊಣೆಗಾರನಲ್ಲ..
ಅದರ ತಲೆಬರಹ

4) ವಿಸ್ಮಯ
ಎಂಥ  ವಿಚಿತ್ರ ಅಲ್ವ
ಬಿದಿರಿನ ತಮ್ಮ ದುರ್ವೆ ಅಂತೆ..!!!!

ಮತ್ತೊಂದು ಹನಿ..  ಚುಟುಕ..

5)ಹನಿಕವಿ

ಅವಳನ್ನು ಕಂಡಾಗಲೆಲ್ಲ
ನಾನಾಗುತ್ತೇನೆ..,,
ಹನಿ ಕವಿ..honey ಕವಿ..
ಮತ್ತು...
ಹನಿ ಹನಿ ಕವಿ..!!                 

Thursday, October 8, 2009

ಎಲ್ಲ ಮರೆತಿರುವಾಗ ( ಕಥೆ-ಭಾಗ 4)

(ಮೂರನೆ ಭಾಗದಿಂದ.....)
***************************************
ರಚನಾ ಗೆ ಸಂದಿಗ್ಧವಾಗಿತ್ತು..
ಅವನನ್ನು ಕರೆದೊಯ್ಯಬೇಕು ಅನ್ನುವ ಆಸೆ.. ಆದರೆ ಯಾರು ಏನು ಹೇಳುತ್ತಾರೋ ಎಂಬ ಆಲೋಚನೆ ಬೇರೆ..
ಕೊನೆಗೆ ಆಕೆ ನಿರ್ಧರಿಸಿ..ಆತನನ್ನು ಕರೆದೊಯ್ದಳು..
ಪಾಪ.. ಆಟ ಮೊದಲಿಗೆ ಈಕೆಯ್ ಜೊತೆಗೆ ಬರಲೇ ಇಲ್ಲ..
ಈಕೆಯೂ ಬಿಡಲಿಲ್ಲ..
ಆಕೆ ನೇರವಾಗಿ ಅವನನ್ನು ಕರೆದೊಯ್ದದ್ದು ಒಂದು ಹುಚ್ಚರ ಆಸ್ಪತ್ರೆಗೆ..
ಅಲ್ಲಿ ಅವನನ್ನು ಚಿಕಿತ್ಸೆಗೆ ಒಳಪಡಿಸಲಾಯಿತು..
ಸುಮಾರು ಎರಡು ತಿಂಗಳ ನಂತರ ಆತ ಸರಿಯಾದ..
ಮೊದಲಿನ ಹಾಗೆ ಉತ್ತಮ ವ್ಯಕ್ತಿ ಆದ..
ಹುಚ್ಚು ಬಿಟ್ಟಿತು..
***************************************************
ಕೊನೆಗೊಮ್ಮೆ ರಚನಾ , ಅವನನ್ನು ಬೆಂಗಳೂರಿನ ತನ್ನ ಮನೆಗೆ ಕರೆದೊಯ್ದಳು.
ಆತನಿಗೆ ಯಾಕೋ ತುಂಬಾ ಮುಜುಗರವಾಗಿತ್ತು..
ಆದರೆ ಮುಜುಗರದಸ್ಟೆ ಆತ್ಮೀಯತೆಯ ಭಾವವು ಆಕೆಯೆಡೆಗೆ ಉಮ್ಟಗಿತ್ತು..
ರಚನಾ ಅವನನ್ನು ಮೊದಲಿನ ಹಾಗೆ ಮಾಡಲು ಬಹಳ ಪ್ರಯತ್ನ ಪಟ್ಟು ಯಶಸ್ವಿಯಾದಳು..
ಆತನು ದಿನ ಕಳೆದಂತೆ ಮೊದಲಿನ ಲವಲವಿಕೆ ಪಡೆದುಕೊಂಡ..
ಅಲ್ಲದೆ ಮೊದಲಿನ ಹಾಗೆ ಹಾಡಲು ಪ್ರಾರಂಭಿಸಿದ...
ಅವನನ್ನು ಆಕೆ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಕರೆದೊಯ್ದು ಹಾಡಲು ಪ್ರಾರಂಭಿಸಿದಳು..
ಮೊದಮೊದಲು ಆತ ಬಹಳವೇ ಕಷ್ಟ ಪಟ್ಟ. ಆದರು ಕೊನೆಗೆ ಆತ ಸರಿಯಾದ ದಾರಿಗೆ ಬಂದ..
ಹಿಂದೆಂದೂ.. ಕಲಿತಿದ್ದ ರಾಗಗಳೆಲ್ಲ.. ನೆನಪಾದವು..
ಮರೆತರು ಮರೆಯದ ಸಂಗೀತ ಮತ್ತೆ ಹಾಡಾಗಿ ಬಂತು..
******************************************
ಇಂಥ ಹೊತ್ತಿನಲ್ಲಿಯೇ ಆಕೆ ಆತನಿಗೆ ಸ್ವಲ್ಪ ಸ್ವಲ್ಪವಾಗಿಯೇ ಹತ್ತಿರವಾಗ ತೊಡಗಿದಳು..
ಸ್ನೇಹ ಕ್ರಮೇಣ ಪ್ರೇಮದೆಡೆಗೆ ತಿರುಗತೊಡಗಿತು.....

(ಮುಂದುವರಿಯುವುದು............................................)

Wednesday, October 7, 2009

ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ

ಇದು ನಮ್ಮ ಪ್ರಿತಿಯ್ ನಿರ್ದೇಶಕ ಯೋಗರಾಜ ಭಟ್ ಬರೆದ ಮುಂಗಾರು ಮಳೆ ಯಾ ಕವಿತೆ.. 
ಹಾಗೇ ಸುಮ್ಮನೆ ಇಲ್ಲಿ ಇಟ್ಟಿದ್ದೇನೆ ಅಸ್ಟೇ...

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ


ನಿನ್ನ ಮುಗಿಲ ಸಾಲೆ..
ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯ ಜಡಿ ಮಳೆಗೆ..
ಪ್ರೀತಿ ಮೂಡಿದೆ

ಯಾವ ಚಿಪ್ಪಿನಲ್ಲಿ..
ಯಾವ ಹನಿಯು ಮುತ್ತಾಗುವುದೊ..
ಒಲವು ಎಲ್ಲಿ ಕುಡಿ ಒಡೆಯುವುದೊ..
ತಿಳಿಯದಾಗಿದೆ

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ

—————-೧————————–

ಭುವಿ ಕೆನ್ನೆ ತುಂಬ..
ಮುಗಿಲು ಸುರಿದ ಮುತ್ತಿನ ಗುರುತು

ನನ್ನ ಎದೆಯ ತುಂಬ..
ಅವಳು ಬಂದ ಹೆಜ್ಜೆಯ ಗುರುತು..
ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ

ಎಳೆ ಮುಗಿಲಿನಲ್ಲಿ..
ರಂಗು ಚೆಲ್ಲಿ ನಿಂತಳು ಅವಳು..
ಬರೆದು ಹೆಸರ ಕಾಮನ ಬಿಲ್ಲು…
ಏನು ಮೋಡಿಯೊ

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ

—————-೨————————–

ಯಾವ ಹನಿಗಳಿಂದ..
ಯಾವ ನೆಲವು ಹಸಿರಾಗುವುದೊ

ಯಾರ ಸ್ಪರ್ಷದಿಂದ..
ಯಾರ ಮನವು ಹಸಿಯಾಗುವುದೊ..
ಯಾರ ಉಸಿರಲ್ಯಾರ ಹೆಸರೊ..
ಯಾರು ಬರೆದರೊ

ಯಾವ ಪ್ರೀತಿ ಹೂವು..
ಯಾರ ಹೃದಯದಲ್ಲರಳುವುದೊ..
ಯಾರ ಪ್ರೇಮ ಪೂಜೆಗೆ ಮುಡಿಪೊ..
ಯಾರು ಬಲ್ಲರು...

ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ