Thursday, May 17, 2018

*ಗೋಕರ್ಣ ಮಹಾತ್ಮೆ*




ಗಜಮುಖ ಗಣಪನ ಭಜಿಸಿ ಶಾರದೆಯನು ಸ್ತುತಿಸಿ
ಒರೆವೆನು ಗೋಕರ್ಣದ ಮಹಿಮೆಯ ವಿಸ್ತರಿಸಿ
ನರಲೋಕದೊಳು ಪಾಪ ಅಧಿಕವೆಂದೆನಿಸಿ
ಸುರಮುನಿ ಗೋಕರ್ಣದ ಮಹಿಮೆಯ ವಿಸ್ತರಿಸಿ
ಜಯದೇವ ಜಯದೇವ ||ಪ||



ಜಯಜಯ ವಿಘ್ನೇಶ್ವರಗೆ ಜಯಗೌರಿ ಪ್ರಿಯಗೆ
ಜಯಜಯ ಸಾಗರರಾಯ ಕೋಟೀತೀರ್ಥನಿಗೆ
ಜಯಜಯ ವೇಂಕಟರಮಣಗೆ ಮಂಕಾಳೇಶ್ವರಿಗೆ
ಜಯಜಯ ಗೋಕರ್ಣಾದ ಸರ್ವದೇವರಿಗೂ
ಜಯದೇವ ಜಯದೇವ ||೧||



ಒಂದು ದಿನ ಕೈಕಸೆಯು ಲಿಂಗವ ಪೂಜಿಸಲು
ಬಂದಾ ರಾವಣನಾ ಕಾಲಿಂದ ಛೇದಿಸಲು
ತಂದು ಕೊಡುವೆನು ಪ್ರಾಣಲಿಂಗವೆಂದೆನುತಾ
ಬಂದನೆ ಕೈಲಾಸಕ್ಕೆ ಹರಗೆ ವಂದಿಸುತಾ
ಜಯದೇವ ಜಯದೇವ ||೨||



ಬಂದಾ ರಾವಣನಾತ ಕಂಡೂ ಉಪಚರಿಸಿ
ಪ್ರಾಣಲಿಂಗವ ಕೊಡಲು ಸುರರೂ ಚಿಂತಿಸಿ
ಕಂದಾ ಗಣಪತಿಯಾ ಭಕ್ತಿಂದಾ ಪೂಜಿಸಿ
ವಂದಿಸಿ ಕಳಿಸಿದರಾಗ ಸುರರು ಸಂಸ್ತುತಿಸಿ
ಜಯದೇವ ಜಯದೇವ ||೩||



ಕಂಜಾಸಖಗರ್ಘ್ಯವನು ಕೊಡುವೆನೆಂದೆನುತಾ
ಹಂಬಲಿಸಿ ಬರುತಿರಲು ಕಂಡೂ ಬಾಲಕನಾ
ಕಂದಾ ಹಿಡಿ ಲಿಂಗವನು ಎಂದೂ ಘರ್ಜಿಸುತಾ
ಲಿಂಗವ ಕೊಟ್ಟು ನಡೆದಾನೆ ಅರ್ಘ್ಯಕೆಂದೆನುತಾ
ಜಯದೇವ ಜಯದೇವ ||೪||



ಆಡಿದ ಮಾತಿಗೆ ತಪ್ಪದೆ ಬಾಲಕ ಗಣಪ
ಮೂರು ಬಾರಿ ಕರೆದು ಲಿಂಗವ ಸ್ಥಾಪಿಸಿದ
ಆ ಮೇಳ್ಯಕೆ ಸುರರೆಲ್ಲ ಜಯಜಯ ಶಬ್ದ
ಬಂಗಾರದ ಮಳೆಗಳನೆ ಸುರಿಸಲಾಶ್ಚರ್ಯ
ಜಯದೇವ ಜಯದೇವ ||೫||



ಕೆಟ್ಟೆನೆಂದ್ ಬಾಲಕನಾ ಸಿಟ್ಟಿಲಿ ರಾವಣನು
ಮುಷ್ಟಿಲಿ ತ್ರಾಣಿಸಿ ತೆಗೆದನು ಸಜ್ಜಯಲಿಂಗವನು
ಪಂಚದಿಕ್ಕಿಗು ಒಗೆಯಲು ಪಂಚಕ್ಷೇತ್ರೆನುತಾ
ವಂಚಿಸಿ ತೆಗೆಯಲು ಬಾರದು ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೬||



ಕಡುನಾಚಿ ರಾವಣನು ಓಡಿದನಾಕ್ಷಣದಿ
ಸುರರು ಭೂಸುರರೆಲ್ಲ ನೆರೆದರಥ್ಯದಲಿ
ನಿರ್ವಿಘ್ನದಾಯಕನೆಂದು ಪೂಜಿಸಲು
ಮೊದಲಾರಾಧನೆ ಈತನು ವಿಘ್ನೇಶ್ವರನೆಂದು
ಜಯದೇವ ಜಯದೇವ ||೭||



ಅಷ್ಟದಿಕ್ಪಾಲಕರೊಳ್ ಮಧ್ಯದಿ ಮಹಾಬಲನು
ಅರ್ಧಾಂಗಿ ಸಹಿತ ಸಾಗರನೂ ಷಣ್ಮುಖನು
ಅಷ್ಟಾಮಾವದ್ಯ ಜೋಗುಳದ ಮಧ್ಯದಲಿ
ನಿತ್ಯವು ರುದ್ರಾಭಿಷೇಕವು ಕೋಟೀತೀರ್ಥದಲಿ
ಜಯದೇವ ಜಯದೇವ ||೮||



ವರುಷಕ್ಕೆ ಬರುವದು ಮಹಾಯೋಗ ಶಿವರಾತ್ರೆ
ದರುಶನಕೆಂದ್ ಬರುವರು ಜನರ ಗಲಾಟೆ
ಪರಮಪುರುಷನ ತೇರ ಎಳೆವ ಭರಾಟೆ
ವೈಕುಂಠನಾಭ ಶ್ರೀ ವೇಂಕಟನಾ ಭೇಟಿ
ಜಯದೇವ ಜಯದೇವ ||೯||



ಸ್ತ್ರೀಹತ್ಯಾ ಶಿಶುಹತ್ಯಾ ಗೋಳತ್ಯಾಗಳನು
ನಿರ್ಮಿಸಿದನು ಬ್ರಹ್ಮನು ಮಹಾಪಾತಕಗಳನು
ದುಷ್ಕರ್ಣಿ ಚಾಂಡಾಳಿ ರಜಸ್ವಲೆ ದೋಷಂಗಳನು
ಶಿವಸ್ಮರಣೆಯೊಳ್ ಮಾತ್ರ ಸುಡುವದು ಸತ್ಯ ಪೇಳಿದರೆ
ಜಯದೇವ ಜಯದೇವ ||೧೦||



ಗೋಕರ್ಣದಲ್ಲಿರುವ ತಾಂಬರಗೌರಿ ತ್ರಾಸಿಡಿದು
ತೂಗಿದರೆ ಗೋಕರ್ಣವೇ ಮೇಲು
ಯಾತ್ರೆ ಮಾಡಿದ ವಾರ ಪಾಪ ಪರಿಹಾರ
ಕಾಶಿಯಿಂದಧಿಕ ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೧೧||



ನಿತ್ಯ ಗೋಕರ್ಣದ ಮಹಿಮೆಯ ಪೇಳ್ವವರಿಗ್
ಸಪ್ತಜನ್ಮದ ಪಾಪವು ಕಳೆದು ಹೋಗುವುದು
ಭಕ್ತಿಮುಕ್ತಿಯು ಸಂತಾನ ಸೌಭಾಗ್ಯ
ತಪ್ಪದೆ ಕೊಡುವನು ಶ್ರೀ ಮಹಾಬಲ ಲಿಂಗೇಶ
ಜಯದೇವ ಜಯದೇವ ||೧೨||

* ಹರಹರ ಮಹಾದೇವ *



(ಹವ್ಯಕ ಬಾಂಧವರ ಪಾಲಿನ ಮಹಾನ್ ಗೀತೆ.  ನಿಮಗೆಲ್ಲ ಓದಲು ಸಿಗಲಿ ಅಂತ ಪೂರ್ತಿ ಹಾಕಿದ್ದೇನೆ. ಇದನ್ನು ಬರೆದವರು ಯಾರು ಅಂತಾ ಗೊತ್ತಿಲ್ಲ. ಆದರೆ ನಮ್ಮ ಮನೆ ಮನೆಗಳಲ್ಲಿ ಆಗಾಗ ಹಾಡ್ತಾ ಇರುತ್ತಾರೆ. ಓದಿ. )

Tuesday, May 15, 2018

ಟುಸ್ ಪಟಾಕಿ ಆಟಗಾರರು

ಈ ಸಾಲಿನ ಐಪಿಎಲ್‌ನಲ್ಲಿ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಇನ್ನೂ ಹಲವು ಪ್ರತಿಭೆಗಳು ಅತ್ಯುತ್ತಮ ಆಟದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿವೆ. ಇನ್ನೂ 20 ವರ್ಷವೂ ಆಗದ ಆಟಗಾರರು ದಿಗ್ಗಜರೇ ಮೆಚ್ಚುವಂತೆ ಆಟವನ್ನಾಡಿ ಚಿತ್ತ ಸೂರೆಗೊಂಡಿದ್ದಾಾರೆ. ಇದರ ನಡುವೆಯೇ ಐಪಿಎಲ್‌ಗೂ ಮೊದಲು ಸಾಕಷ್ಟು ಸದ್ದು ಮಾಡಿದ್ದ ಆಟಗಾರರು ಟುಸ್ ಪಟಾಕಿಗಳಾಗಿದ್ದಾಾರೆ. ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ವಿಲರಾಗಿದ್ದಾರೆ.

ಯುವರಾಜ್ ಸಿಂಗ್
ಈ ಐಪಿಎಲ್‌ನಲ್ಲಿ ಸದ್ದು ಮಾಡಲು ವಿಲರಾದ ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರೇ ಯುವರಾಜ್ ಸಿಂಗ್. 2011ರ ವಿಶ್ವಕಪ್ ಹೀರೋ ಎಂದೇ ಬಣ್ಣಿಸಲ್ಪಡುವ ಟಿ20 ಸ್ಪೆಷಲಿಸ್‌ಟ್‌‌, ಸಿಕ್ಸರ್‌ಗಳ ಸರದಾರ ಈ ಐಪಿಎಲ್‌ನಲ್ಲಿ ಪ್ರಭಾವಿ ಎನ್ನಿಸಲೇ ಇಲ್ಲ. ಕಿಂಗ್‌ಸ್‌ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಯುವಿ ತಾನಾಡಿದ ಏಳು ಪಂದ್ಯಗಳ ಐದು ಇನ್ನಿಂಗ್ಸ್ಗಳಲ್ಲಿ  ಭಾರಿಸಿದ ರನ್ ಕೇವಲ 64. ಗರಿಷ್ಠ ಮೊತ್ತ 20. ಸರಾಸರಿ 12.80.

ಆರೋನ್ ಫಿಂಚ್.
ಪಂಜಾಬ್ ತಂಡದ ಇನ್ನೋರ್ವ ಆಟಗಾರ ಆರೋನ್ ಫಿಂಚ್ ಕೂಡ ಈ ಸಾರಿ ಟುಸ್ ಪಟಾಕಿಯಾಗಿದ್ದಾಾರೆ. ಮದುವೆ ಮುಗಿಸಿ ಸೀದಾ ಐಪಿಎಲ್ ಅಂಗಳಕ್ಕೆ ಕಾಲಿರಿಸಿದ್ದ ಫಿಂಚ್ ಒಂದೇ ಒಂದು ಪಂದ್ಯದಲ್ಲೂ ಮಿಂಚಿಲ್ಲ. ಫಿಂಚ್ ಗಳಿಗೆ 7 ಪಂದ್ಯಗಳ 6 ಇನ್ನಿಂಗ್ಸ್ಗಳಲ್ಲಿ  58ರನ್. ಗರಿಷ್ಠ 34. ಸರಾಸರಿ 11.60.

ಗೌತಮ್ ಗಂಭೀರ್
ಒಂದಾನೊಂದು ಕಾಲದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಆಗಿದ್ದ ಗೌತಮ್ ಗಂಭೀರ್‌ಗೆ ಈ ಐಪಿಎಲ್‌ನಲ್ಲಿ ದುರದೃಷ್ಟ ವಕ್ಕರಿಸಿದಂತಿದೆ. ಮೊದಲು ಬ್ಯಾಟಿಂಗ್‌ನಲ್ಲಿ ವಿಫಲ, ಆಮೇಲೆ ತಂಡಕ್ಕೆ ಸಾಲುಸಾಲು ಸೋಲು. ಬೆನ್ನಲ್ಲೇ ನಾಯಕತ್ವಕ್ಕೆ ರಾಜೀನಾಮೆ. ಅಷ್ಟಲ್ಲದೇ ಪಂದ್ಯಗಳಿಂದಲೂ ಹೊರಗುಳಿಯುವಂತಹ ಪರಿಸ್ಥಿತಿ. ಗಂಭೀರ್ ಈ ಋತುವಿನಲ್ಲಿ ಆಡಿದ್ದು 6 ಪಂದ್ಯಗಳು. ಅದರಲ್ಲಿ 5 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಮಾಡಿದ ಗಂಭೀರ್ ಭಾರಿಸಿದ್ದು 85 ರನ್. ಗರಿಷ್ಠ 55. ಸರಾಸರಿ 17.

ಕೀರನ್ ಪೊಲಾರ್ಡ್
ಟಿ20 ಸ್ಪೆಷಲಿಸ್ಟ್ , ವಿಂಡೀಸ್ ದೈತ್ಯ ಈ ಋತುವಿನಲ್ಲಿ ಆಡಿದ್ದು 7 ಪಂದ್ಯ. ಅದರಲ್ಲಿ 6 ಇನ್ನಿಂಗ್ಸ್ಗಳಲ್ಲಿ  ಭಾರಿಸಿದ ರನ್ 76. ಗರಿಷ್ಠ 28. ಸರಾಸರಿ 15.20. ಮುಂಬಯಿ ತಂಡದ ಖಾಯಂ ಆಟಗಾರರಲ್ಲಿ ಒಬ್ಬ ಎಂದೇ ಬಿಂಬಿಸಲ್ಪಟ್ಟಿದ್ದ ಪೊಲಾರ್ಡ್ ಈ ಸಾರಿ ಬೌಲಿಂಗ್‌ನಲ್ಲೂ ವಿಫಲ. ಈ ಕಾರಣದಿಂದಲೇ ತಂಡದ ಮ್ಯಾನೇಜ್‌ಮೆಂಟ್ ಪೊಲಾರ್ಡ್‌ರನ್ನು ಹೊರಕ್ಕೆ ಕೂರಿಸಿದೆ.

ಸರ್ರಾಜ್ ಖಾನ್
ಆರ್‌ಸಿಬಿ ಈ ಋತುವಿನಲ್ಲಿ ರೀಟೇನ್ ಮಾಡಿಕೊಂಡ ಆಟಗಾರ ಸರ್ರಾಜ್ ಖಾನ್. ಆದರೆ ರೀಟೇನ್‌ಗೆ ತಕ್ಕಂತೆ ಆಟವಾಡಲು ವಿಲನಾಗಿರುವ ಸರ್ರಾಜ್ ಖಾನ್ ಫೈಲ್ಯೂರ್  ಸ್ಟಾರ್ ಎಂದೇ ಕುಖ್ಯಾತಿ ಪಡೆದಿದ್ದಾನೆ. ಆಡಿದ 4 ಪಂದ್ಯಗಳಲ್ಲಿ ಭಾರಿಸಿದ್ದು 22 ರನ್. ಗರಿಷ್ಠ 11. ಸರಾಸರಿ 5.50. ವಿಚಿತ್ರ ಎಂದರೆ ಆರ್‌ಸಿಬಿಯ ಎಷ್ಟೋ ಬೌಲರ್‌ಗಳು ಸರ್ರಾಜ್ ಖಾನ್‌ಗಿಂತ ಹೆಚ್ಚಿನ ರನ್ ಹೊಡೆದಿದ್ದಾರೆ. ಆದರೆ ಆರ್‌ಸಿಬಿ ಮಾತ್ರ ಈತನ ಮೇಲೆ ಇನ್ನೂ ನಂಬಿಕೆ ಇಟ್ಟಂತಿದೆ.

ವೃದ್ದಿಮಾನ್ ಸಾಹ
ಭಾರತದ ಟೆಸ್ಟ್  ತಂಡದ ಖಾಯಂ ಆಟಗಾರ. ಅತ್ಯಂತ ವೇಗದ ಶತಕ ಭಾರಿಸಿ ದಾಖಲೆ ನಿರ್ಮಿಸಿದಾತ. ಹೈದರಾಬಾದ್ ತಂಡದ ಈ ಆಟಗಾರ ಐಪಿಎಲ್‌ನ ಈ ಋತುವಿನಲ್ಲಿ ಸಂಪೂರ್ಣ ಟುಸ್ ಪಟಾಕಿ. ಆಡಿದ್ದು 10 ಪಂದ್ಯಘಿ. ಬ್ಯಾಟಿಂಗ್ ಸಿಕ್ಕಿದ್ದು 9 ಪಂದ್ಯದಲ್ಲಿ. ಗಳಿಸಿದ ರನ್ 87. ಗರಿಷ್ಠ 24. ಸರಾಸರಿ 12.42. ಕೀಪಿಂಗ್ ಮಾಡುತ್ತಾಾರೆ ಎನ್ನುವುದಷ್ಟೇ ಸಾಹಾ ಪಾಲಿಗೆ ಸ‘್ಯಕ್ಕಿಿರುವ ಪ್ಲಸ್ ಪಾಯಿಂಟ್

Monday, May 14, 2018

ಗುಂಡು, ಬಾಂಬುಗಳ ನಾಡಿನ ಕ್ರಿಕೆಟ್ ಪ್ರೀತಿ

ಕಳೆದ ವರ್ಷ ಟೆಸ್ಟ್ ಮಾನ್ಯತೆ ಪಡೆದ ಎರಡು ರಾಷ್ಟ್ರಗಳಲ್ಲೊಂದು ಅಫಘಾನಿಸ್ತಾನ.  ಸದಾ ಬಾಂಬು ಸಿಡಿಯುವ, ಬಂದೂಕಿನ ಮೊರೆತ ಗೇಳುವ, ಗುಂಡಿನ ಸದ್ದು ಅನುರಣಿಸುವ ನಾಡಿಗೆ ಟೆಸ್ಟ್  ಮಾನ್ಯತೆ ಸಿಕ್ಕಿದೆ. ಅಫ್ಘಾನ್ ನಾಡಿನ ಕ್ರಿಕೆಟ್ ಪ್ರೀತಿಗೆ ಟೆಸ್ಟ್  ಮಾನ್ಯತೆ ಸಿಕ್ಕಿದ್ದು, ಮುಂದಿನ ತಿಂಗಳು ಭಾರತ ವಿರುದ್ಧ ತಮ್ಮ ಮೊಟ್ಟ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.
ರಷ್ಯಾ ಅತಿಕ್ರಮಣ, ಮುಜಾಹಿದಿನ್‌ಗಳ ಅಟ್ಟಹಾಸ, ತಾಲೀಬಾನಿಗಳ ಅಬ್ಬರ, ಲಾಡೆನ್, ಓಮರ್‌ಗಳ ಉಗ್ರವಾದ, ಅಮೆರಿಕಾದ ಸತತ ದಾಳಿ ಹೀಗೆ ಅಫಘಾನಿಸ್ತಾನದ  ಮೇಲೆ ನಡೆಯದ ಸಾಲು ಸಾಲು ಹಿಂಸಾಕೃತ್ಯಗಳಿಗೆ ಕೊನೆಯೇ ಇಲ್ಲ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ, ಯಾವ ಜಾಗದಲ್ಲಿ ಬಾಂಬುಗಳು ಸಿಡಿದು ಯಾರನ್ನು ಬಲಿತೆಗೆದುಕೊಳ್ಳುತ್ತದೆಯೋ? ಮತಾಂಧ  ಉಗ್ರರು ಯಾವ ಸಂದರ್ಭದಲ್ಲಿ  ದಾಳಿ ಮಾಡಿ ಹತ್ಯೆ ಮಾಡುವರೋ, ಹೀಗೆ ಕ್ಷಣ ಕ್ಷಣವೂ ಆತಂಕ ತುಂಬಿದ ನಾಡಲ್ಲಿ ಕ್ರಿಕೆಟ್ ಅರಳಿ ನಿಂತಿದೆ. ನೆರೆಯ ಭಾರತ, ಪಾಕಿಸ್ತಾನಗಳಂತೆ ಅಫ್ಘಾನಿಗಳು  ಕ್ರಿಕೆಟನ್ನು ವಿಶೇಷವಾಗಿ ಪ್ರೀತಿಸಿದ್ದು, ದಿನದಿಂದ ದಿನಕ್ಕೆ ಮಾಗುತ್ತಿದ್ದಾರೆ. ಅವರ ಸತತ ಪರಿಶ್ರಮಕ್ಕೆ ಟೆಸ್ಟ್  ಮಾನ್ಯತೆ ಸಿಕ್ಕಿದೆ.
ಇತಿಹಾಸ :
19ನೇ ಶತಮಾನದಲ್ಲಿ ಆಂಗ್ಲೋ  ಆಫ್ರಿಕನ್ ಯುದ್ಧದಲ್ಲಿ  ಅಫ್ಘಾನ್ ಯೋದರು ಬಳಕೆಯಾದರು. ಆ ಯೋಧರಿಗೆ ಕ್ರಿಕೆಟ್ ಕಲಿಸಿದ್ದು ಬ್ರಿಟೀಷರು. ಈ ಬ್ರಿಟೀಷರೇ 1839ರಲ್ಲಿ ಕಾಬೂಲಿನಲ್ಲಿ ಮೊದಲು ಕ್ರಿಕೆಟ್ ಆಡಿದರು ಎನ್ನುವ ದಾಖಲೆಗಳೂ ಇವೆ. ಆದರೆ ನಂತರದ ದಿನಗಳಲ್ಲಿ ಆ ದೇಶಕ್ಕೆ ಕ್ರಿಕೆಟ್ ಮರಳಲು 160 ವರ್ಷಗಳೇ ಬೇಕಾದವು.
1990ರ ದಶಕದ ಸಂದರ್ಭರ್ದಲ್ಲಿ ಯುದ್ಧಪೀಡಿತ ನಾಡಿನಲ್ಲಿ ಎಲ್ಲೆಡೆ ಬಯಲೇ ಇದ್ದರೂ, ಕ್ರಿಕೆಟ್ ಮುಂತಾದ ಆಟಕ್ಕೆ ಅವಕಾಶವೇ ಇರಲಿಲ್ಲ. ದೇಶದಲ್ಲಿ ಕ್ರಿಕೆಟ್‌ಗೆ ಬ್ಯಾನ್ ಮಾಡಿದ್ದ ತಾಲೀಬಾನಿಗಳು ಸ್ಥಳೀಯರು ಕ್ರಿಕೆಟ್ ಆಡಲು ಮುಂದಾದರೆ ಗುಂಡಿಕ್ಕುತ್ತಿದ್ದ ಕಾಲವೂ ಇತ್ತು. ಜೀವ ಉಳಿಸಿಕೊಳ್ಳುವ ಸಲುವಾಗಿ ಪಾಕಿಸ್ತಾಾನಕ್ಕೆ ವಲಸೆ ಬಂದವರು, ಪಾಕಿಸ್ತಾನಿಯರ ಜೊತೆ ಕ್ರಿಕೆಟ್ ಆಡುತ್ತ ಆಡುತ್ತ ತಮ್ಮದೇ ತಂಡವನ್ನು ಕಟ್ಟಿಕೊಂಡರು. ಸಮಯ ಸಿಕ್ಕಾಗಲೆಲ್ಲ ತಮ್ಮೊಳಗಿನ ಕ್ರಿಕೆಟ್‌ಗೆ ಪೋಷಣೆ ನೀಡಿದರು. ಪಾಕಿಸ್ತಾನದ ನೆಲದಲ್ಲಿಯೇ ತಮ್ಮ ತಂಡವನ್ನೂ ಕಟ್ಟಿಕೊಂಡ  ಅಫ್ಘಾನ್ರು ತಂಡಕ್ಕೆ ಒಳ್ಳೆಯ ಕೋಚನ್ನು ನೇಮಿಸಿ ಶಸೋಕ್ತವಾಗಿ ಕ್ರಿಕೆಟ್ ಕಲಿತರು. ಯುದ್ಧ ಮುಗಿದ ಮೇಲೆ  ಅಫ್ಘಾನ್ಗೆ ಮರಳಿದ ಇವರು ಅಲ್ಲಿ ಕ್ರಿಕೆಟ್ ಬೇರುಗಳನ್ನು ಬಿತ್ತಿದರು. ನಂತರ ನಡೆದಿದ್ದು ಇತಿಹಾಸ.
1995ರಲ್ಲಿ ಅ್ಘಾನಿಸ್ತಾನ ಕ್ರಿಕೆಟ್ ೆಡರೇಶನ್ ಅಸ್ತಿಿತ್ವಕ್ಕೆೆ ಬಂದಿತು. ವರ್ಷದಿಂದ ವರ್ಷಕ್ಕೆೆ ಗುಣಮಟ್ಟದ ಕ್ರಿಿಕೆಟ್ ಆಡಿದ ಪರಿಣಾಮ 2009ರಲ್ಲಿ ಅ್ಘಾನಿಸ್ತಾಾನಕ್ಕೆೆ ಏಕದಿನ ಪಂದ್ಯಗಳನ್ನು ಆಡಲು ಮಾನ್ಯತೆ ಸಿಕ್ಕಿಿತು. 2012ರಲ್ಲಿ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಆಡಲು ಅರ್ಹತೆ ಪಡೆಯಿತು. ಪ್ರಸ್ತುತ ಅ್ಘಾನಿಸ್ತಾಾನದಲ್ಲಿ ಕ್ರಿಿಕೆಟ್ ಜನಪ್ರಿಿಯ ಕ್ರೀಡೆಯಾಗಿದೆ. ಯುದ್ಧಘಿ, ಬಾಂಬು, ಗುಂಡಿನ ಮೊರೆತದ ನಡುವೆಯೂ ಕ್ರಿಕೆಟ್ ಅರಳಿದೆ. ಅ್ಘಾನಿಗಳು ಎಲ್ಲವನ್ನೂ ಮರೆತು ಕ್ರಿಿಕೆಟ್ ಆಡಲು ಮುಂದಾಗುತ್ತಿಿರುವುದು ವಿಶೇಷ. ಅಷ್ಟೇ ಏಕೆ ಬಲಾಢ್ಯ ತಂಡಗಳನ್ನು ಹೆಡೆಮುರಿ ಕಟ್ಟಿಿ 2019ರ ವಿಶ್ವಕಪ್‌ಗೂ ಅರ್ಹತೆ ಪಡೆದುಕೊಂಡಿದೆ.
ಅ್ಘಾನಿಸ್ತಾಾನ ಕ್ರಿಿಕೆಟ್ ಮಂಡಳಿ
ಕಾಬೂಲ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅ್ಘಾನಿಸ್ತಾಾನ ಕ್ರಿಿಕೆಟ್ ಮಂಡಳಿ 2013ರಿಂದ 2017ರ ವರೆಗೆ ಐಸಿಸಿಯ ಸಹ ಸದಸ್ಯ ರಾಷ್ಟ್ರ ಸ್ಥಾಾನಮಾನ ಹೊಂದಿತ್ತು. 2017ರಲ್ಲಿ ಟೆಸ್‌ಟ್‌ ಮಾನ್ಯತೆ ಪಡೆದ ನಂತರ ಪೂರ್ಣಾವ ಸದಸ್ಯ ರಾಷ್ಟ್ರ ಸ್ಥಾನಮಾನ ಹೊಂದಿದೆ.
ಕ್ರಿಕೆಟ್ ಮೈದಾನ
ಟೆಸ್‌ಟ್‌ ಮಾನ್ಯತೆ ಪಡೆದಿರುವ ರಾಷ್ಟ್ರವಾಗಿದ್ದರೂ ಅ್ಘಾನಿಸ್ತಾಾನದ ನೆಲದಲ್ಲಿ ಇದುವರೆಗೂ ಒಂದೇ ಒಂದು ಅಂತಾರಾಷ್ಟ್ರೀಯ ಕ್ರಿಿಕೆಟ್ ಪಂದ್ಯಗಳು ನಡೆದಿಲ್ಲ. ಗುಣಮಟ್ಟದ ಮೈದಾನದ ಕೊರತೆ ಹಾಗೂ ಸದಾಕಾಲ ಉಗ್ರರ ‘ಾಳಿಯ ‘ಯವೇ ಇದಕ್ಕೆ ಕಾರಣ. ತಾಲೀಬಾನ್ ಸೇರಿದಂತೆ ಹಲವು ಉಗ್ರರ ಪ್ರಾಾಬಲ್ಯ ಜಾಸ್ತಿ ಇರುವ ಕಾರಣ ಯಾವುದೇ ತಂಡಗಳೂ ಅ್ಘಾನಿಸ್ತಾಾನದಲ್ಲಿ ಕ್ರಿಿಕೆಟ್ ಆಡಲು ಮುಂದಾಗಿಲ್ಲಘಿ.
ಅ್ಘಾನಿಸ್ತಾಾನ ಕೆಲಕಾಲ ಶ್ರೀಲಂಕಾದ ರಣಗಿರಿ ದಂಬುಲಾ ಮೈದಾನವನ್ನು ತನ್ನ ಹೋಂ ಪಿಚ್ ಮಾಡಿಕೊಂಡಿತ್ತುಘಿ. ಟಿ20 ಪಂದ್ಯಗಳಿಗಾಗಿ ಯುಎಇಯ ಶಾರ್ಜಾ ಕ್ರಿಿಕೆಟ್ ಅಸೋಸಿಯೇಶನ್‌ನ ಮೈದಾನವನ್ನು ಹೋಂ ಗ್ರೌೌಂಡ್ ಮಾಡಿಕೊಂಡಿತ್ತುಘಿ. ಪ್ರಸ್ತುತ ‘ಾರತದ ಗ್ರೇಟರ್ ನೋಯ್ಡಾಾದ ಶಹೀದ್ ವಿಜಯ್ ಸಿಂಗ್ ಪಥೀಕ್ ಕ್ರೀಡಾ ಸಂಕೀರ್ಣದ ಮೈದಾನವನ್ನು ಹೋಂ ಗ್ರೌೌಂಡ್ ಮಾಡಿಕೊಂಡಿದೆ.
ಅ್ಘಾನಿಸ್ತಾಾನದ ಜಲಾಲಾಬಾದ್, ಕಂದಾಹಾರ್ ಹಾಗೂ ಕಾಬೂಲ್‌ಗಳಲ್ಲಿ ಹೊಸ ಮೈದಾನಗಳನ್ನು ನಿರ್ಮಾಣ ಮಾಡಲಾಗುತ್ತಿಿದೆ. ‘ಾರತ ಈ ಮೈದಾನಗಳ ನಿರ್ಮಾಣ ಕಾರ್ಯ ಕೈಗೆತ್ತಿಿಕೊಂಡಿರುವುದು ವಿಶೇಷ.
ಪ್ರತಿ‘ಾವಂತ ಆಟಗಾರರು
ಅ್ಘಾನ್ ತಂಡ ಪ್ರತಿ‘ಾವಂತ ಆಟಗಾರರ ಖನಿ ಎಂದರೆ ತಪ್ಪಾಾಗಲಿಕ್ಕಿಿಲ್ಲಘಿ. ಮೊತ್ತಮೊದ ನಾಯಕ ನವ್ರೋೋಜ್ ಮಂಗಲ್, ಹೊಡೆ ಬಡಿ ದಾಂಡಿಗ ಮೊಹಮ್ಮದ್ ಶೆಹಜಾದ್, ಆಲ್‌ರೌಂಡರ್ ಮೊಹಮ್ಮದ್ ನಬಿ, ವಿಶ್ವ ಟಿ20 ನಂ.1 ಬೌಲರ್ ರಶೀದ್ ಖಾನ್, ಉದಯೋನ್ಮುಖ ಪ್ರತಿ‘ೆ ಮುಜೀಬ್ ಉರ್ ರೆಹಮಾನ್, ಜದ್ರಾಾನ್ ಸಹೋದರರು ಹೀಗೆ ಹಲವು ಪ್ರತಿ‘ೆಗಳು ತಂಡದಲ್ಲಿದ್ದು ದಿನದಿಂದ ದಿನಕ್ಕೆೆ ಅ್ಘಾನ್ ತಂಡವನ್ನು ಯಶಸ್ಸಿಿನ ಕಡೆಗೆ ಕರೆದೊಯ್ಯುತ್ತಿಿವೆ.  ಇದೀಗ ಅ್ಘಾನ್ ‘ಾರತದ ವಿರುದ್ಧ ಟೆಸ್‌ಟ್‌ ಪಂದ್ಯಕ್ಕೆೆ ಸಜ್ಜಾಗಿದೆ. ಅ್ಘಾನಿಸ್ತಾಾನದ ತಂಡಕ್ಕೆೆಘಿ, ಶ್ರಮಕ್ಕೆೆ, ಹ್ಯಾಾಟ್ಸಾ್ಾ.

Sunday, May 13, 2018

ಇವರು ಜೀವಮಾನದಲ್ಲೇ ನೋ ಬಾಲ್ ಹಾಕಿಲ್ಲ

(Lans Gibbs)
ಪ್ರಸ್ತುತ ಕ್ರಿಕೆಟ್‌ನಲ್ಲಿ ಇತರೆ ರೂಪದಲ್ಲಿ ತಂಡಕ್ಕೆ ಮಾರಕವಾಗುವಂತಹ ನೋಬಾಲ್‌ನ್ನು ಆಗೀಗ ಕಾಣುತ್ತೇವೆ. ನೋ ಬಾಲ್ ಕಾರಣದಿಂದ ಪಂದ್ಯವನ್ನೇ ಕಳೆದುಕೊಂಡಂತಹ ನಿದರ್ಶನಗಳೂ ಹಲವಿದೆ. ಪ್ರಸ್ತುತ ಒಂದಲ್ಲ ಒಂದು ಆಟಗಾರ ಕನಿಷ್ಠ ಒಂದಾದರೂ ನೋಬಾಲ್ ಹಾಕಿಯೇ ಇರುತ್ತಾನೆ. ನೋಬಾಲ್ ನಂತರದ ಎಸೆತ ಫ್ರೀ ಹಿಟ್ ಆಗುವ ಕಾರಣ ನೋಬಾಲ್ ಹಾಕಿದ ಆಟಗಾರರನ್ನು ಶಪಿಸುತ್ತೇವೆ. ಇದು ಬಿಡಿ ತಮ್ಮ ಕ್ರಿಕೆಟ್ ಜೀವನದಲ್ಲಿ ನೋಬಾಲ್ ಹಾಕದೇ ಇರುವ ಆಟಗಾರರೂ ಇದ್ದಾರೆ.
ಹೌದು. ಕ್ರಿಕೆಟ್ ಕಂಡ ಸಹಸ್ರ ಸಹಸ್ರ ಆಟಗಾರರಲ್ಲಿ ಕೆಲವೇ ಕೆಲವರು ತಮ್ಮ ಬದುಕಿನಲ್ಲಿ ಒಂದೇ ಒಂದು ನೋಬಾಲ್ ಕೂಡ ಹಾಕಿಲ್ಲ. ಹೀಗೆ ನೋಬಾಲ್ ಹಾಕದೇ ಇರುವ ಐವರು ಆಟಗಾರರ ಕಿರುನೋಟ ಇಲ್ಲಿದೆ.

(dennis lilly)
ಲ್ಯಾನ್ಸ್  ಗಿಬ್ಸ್
ವೆಸ್ಟ್  ಇಂಡೀಸ್ ಕಂಡ ಹೆಸರಾಂತ ಸ್ಪಿನ್ ಬೌಲರ್ ಲ್ಯಾನ್ಸ್  ಗಿಬ್ಸ್ . ಇಂಗ್ಲೆೆಂಡಿನ ಟ್ರೆಡ್ ಟ್ರೂಮನ್‌ರ ನಂತರ ಟೆಸ್ಟ್  ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಖ್ಯಾಾತಿ ಇವರಿಗಿದೆ. ಅಷ್ಟೇ ಅಲ್ಲ ಲ್ಯಾನ್ಸ್  ಗಿಬ್ಸ್  300 ವಿಕೆಟ್ ಪಡೆದ ಮೊಟ್ಟ ಮೊದಲ ಸ್ಪಿನ್ನರ್ ಎನ್ನುವ ಗರಿಮೆಯನ್ನೂ ಹೊಂದಿದ್ದಾಾರೆ. 79 ಟೆಸ್‌ಟ್‌ ಆಡಿರುವ ಇವರು ಒಟ್ಟೂ 311 ವಿಕೆಟ್ ಪಡೆದಿದ್ದಾಾರೆ. ಜೊತೆಗೆ 3 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಇಷ್ಟು ಪಂದ್ಯಗಳನ್ನಾಡಿದ್ದರೂ ಇವರು
ಒಂದೇ ಒಂದು ನೋ ಬಾಲ್ ಹಾಕಿಲ್ಲ. ನೋ ಬಾಲ್ ಎಸೆಯದ ಏಕೈಕ ಸ್ಪಿನ್ನರ್ ಇದ್ದರೆ ಅದು ಲ್ಯಾನ್ಸ್  ಗಿಬ್ಸ್  ಮಾತ್ರ.

(Ioan BOTHAM)
ಡೆನ್ನಿಸ್ ಲಿಲ್ಲಿ
ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆಸ್ಟ್ರೇಲಿಯಾದ ಲೆಜೆಂಡ್ ವೇಗದ ಬೌಲರ್‌ಗಳ ಯಾದಿಯಲ್ಲಿ ಸ್ಥಾನ ಪಡೆದಿರುವವರಲ್ಲೊಬ್ಬರು ಲಿಲ್ಲಿ. 1971ರಿಂದ 1984ರ ಅವಯಲ್ಲಿ ಕ್ರಿಕೆಟ್ ಆಟದಲ್ಲಿ ಮಿನುಗಿದ ಲಿಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ತಮ್ಮ 13 ವರ್ಷದ ಕ್ರಿಕೆಟ್ ಬದುಕಿನಲ್ಲಿ ಲಿಲ್ಲಿ 70 ಟೆಸ್ಟ್ ಆಡಿ 355 ವಿಕೆಟ್ ಕಿತ್ತಿದ್ದಾಾರೆ. 23 ಬಾರಿ ಐದು ವಿಕೆಟ್ ಗೊಂಚಲು ಹಾಗೂ 7 ಬಾರಿ 10 ವಿಕೆಟ್ ಗೊಂಚಲು ಉರುಳಿಸಿದ್ದಾಾರೆ. ಅಲ್ಲದೇ 63 ಏಕದಿನ ಪಂದ್ಯಗಳನ್ನಾಾಡಿರುವ ಲಿಲ್ಲಿ 20.83ರ ಸರಾಸರಿಯಲ್ಲಿ 103 ವಿಕೆಟ್ ಕಿತ್ತಿದ್ದಾಾರೆ. ಇವರೂ ಕೂಡ ಒಂದೇ ಒಂದು ನೋ ಬಾಲ್ ಹಾಕಿಲ್ಲ.

(Imraan KHAN)
ಇಯಾನ್ ಬಾಥಮ್
ಇಂಗ್ಲೆೆಂಡಿನ ಹೆಸರಾಂತ ಆಟಗಾರ ಇಯಾನ್ ಬಾಥಮ್. ಸಾರ್ವಕಾಲಿಕ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಟೆಸ್ಟ್  ಹಾಗೂ ಏಕದಿನ ಪಂದ್ಯಗಳಲ್ಲಿ ವಿಶೇಷ ಸಾಧನೆ ಮೆರೆದವರು ಇವರು. ತಮ್ಮ 15 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ 116 ಏಕದಿನ ಪಂದ್ಯಗಳಲ್ಲಿ 145 ವಿಕೆಟ್ ಹಾಗೂ 102 ಟೆಸ್‌ಟ್‌ ಪಂದ್ಯಗಳಲ್ಲಿ 383 ವಿಕೆಟ್ ಕಬಳಿಸಿದ್ದಾರೆ. ಇವರೂ ಕೂಡ ಒಂದೇ ಒಂದು ನೋಬಾಲ್ ಹಾಕಿಲ್ಲ. ಅಷ್ಟೇ ಏಕೆ ಒಂದೇ ಒಂದು ವೈಡ್ ಕೂಡ ಹಾಕಿಲ್ಲ.

ಇಮ್ರಾನ್ ಖಾನ್
ಪಾಕಿಸ್ತಾನದ ಲೆಜೆಂಡ್ ಆಟಗಾರ ಇಮ್ರಾನ್ ಖಾನ್. ಪಾಕ್‌ಗೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ. ಭಾರತದ ವಿರುದ್ಧ ಭಾರತದಲ್ಲಿ ಪಾಕಿಸ್ತಾಾನವನ್ನು ಗೆಲ್ಲಿಸಿದ ಮೊದಲ ನಾಯಕ ಎನ್ನುವ ಹೆಸರು ಇವರಿಗಿದೆ.  ತಮ್ಮ ಕ್ರಿಕೆಟ್ ಬದುಕಿನಲ್ಲಿ ಇಮ್ರಾನ್ ಖಾನ್ ಆಡಿದ್ದು 88 ಟೆಸ್ಟ್ . ಕಬಳಿಸಿದ್ದು 362 ವಿಕೆಟ್. ಅಲ್ಲದೇ 175 ಏಕದಿನ ಪಂದ್ಯಗಳನ್ನಾಾಡಿ 182 ವಿಕೆಟ್‌ಗಳನ್ನೂ ಕಿತ್ತಿದ್ದಾಾರೆ. ಕ್ರಿಕೆಟ್ ಜೀವನದಲ್ಲಿ ನೋಬಾಲ್ ಎಸೆಯದ ಐದೇ ಐದು ಬೌಲರ್‌ಗಳಲ್ಲಿ ಇವರೂ ಒಬ್ಬರು.

ಕಪಿಲ್ ದೇವ್
ಭಾರತಕ್ಕೆ ಮೊಟ್ಟಮೊದಲು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್. ಭಾರತ ಕ್ರಿಕೆಟ್‌ನ ಮಹಾನ್ ಆಟಗಾರರಲ್ಲಿ ಒಬ್ಬ. ಹರ್ಯಾಣದ ಹರಿಕೇನ್ ಎನ್ನುವ ಖ್ಯಾತಿಯನ್ನು ಹೊಂದಿರುವ ಕಪಿಲ್ ದೇವ್ 131 ಟೆಸ್‌ಟ್‌ ಹಾಗೂ 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 434 ಹಾಗೂ ಏಕದಿನ ಪಂದ್ಯಗಳಲ್ಲಿ 253 ವಿಕೆಟ್‌ಗಳನ್ನು ಕಿತ್ತಿದ್ದಾಾರೆ. ತಮ್ಮ 16 ವರ್ಷದ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ನೋಬಾಲ್ ಕೂಡ ಎಸೆದಿಲ್ಲ.

ಈ ಐವರು ಬೌಲರ್‌ಗಳು ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ನೋಬಾಲ್ ಹಾಕಿಲ್ಲ. ಇತ್ತೀಚೆಗೆ ನೋಬಾಲ್, ವೈಡ್ ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇವರು ನೀಡುವ ಅತಿರಿಕ್ತ ರನ್ನುಗಳು ಪಂದ್ಯದ ಗತಿಯನ್ನೇ ಬದಲಿಸುತ್ತಿವೆ. ಹೀಗಿದ್ದಾಗ ಈ ಐವರು ಬೌಲರ್‌ಗಳು ಎಲ್ಲರಿಗೂ ಮಾದರಿ ಎನ್ನಿಸುತ್ತಾಾರೆ.