Tuesday, July 1, 2014

ನೀನು-ಪ್ರೀತಿ

(ರೂಪದರ್ಶಿ: ಅನೂಷಾ ಹೆಗಡೆ)
1) ಸುತ್ತ ಕೊಂಚವೂ ಜಾಗವಿಲ್ಲದಂತೆ
    ನನ್ನೊಡಲ ಆವರಿಸಿರುವ ಬಸರಿಮರ ನೀನು ||

    ದೊಡ್ಡ ಅಮೆಜಾನಿನಗಲ ನದಿಯೊಳಗೆ
    ಅಷ್ಟೇ ದೊಡ್ಡ ಬೆಳೆದಿಹ ನೈದಿಲೆ ನೀನು ||
   
    ನನ್ನಂತೆ, ಯಾರಂಕೆಗೂ ಸಿಗದ
    ಹಸಿರೊಸರುವ ಪ್ರಕೃತಿ ನೀನು ||

    ಒಮ್ಮಿಂದೊಮ್ಮೆಲೆ ಮನದೊಳಗೆ ಧುತ್ತೆಂದು
    ಮೂಡುವ ಬರಿಕಲ್ಪನೆ ನೀನು ||

    ನಿಜ, ನಾನಂದುಕೊಂಡಂತೆ ಇರುವ ವಿ-
    ಭಿನ್ನ, ವಿ-ಶಿಷ್ಟ, ವರ್ಣನಾತ್ಮಕ ಪ್ರೀತಿ ನೀನು ||


2)  ನೀನೇ ಹಾಗೆ ಬಸುರಿ ಮರದಂತೆ
     ಉಸಿರುಗಟ್ಟಿಸ್ತೀಯಾ, ಎದೆಯೊಳಗೆ
     ಅಮೆಜಾನಿನಗಲವಾಗಿ ಬಿಡುತ್ತೀಯಾ ||

     ನಿನ್ನೊಡಲು ನಿಗೂಢ-ಹಸಿರು, ಜೊತೆಗೆ
     ಪ್ರೀತಿಯ ಒಸರು-ಕುಸುರು,
     ನಿನಗೆ ಅಂಕೆಯಿಲ್ಲ, ಸ್ವತಂತ್ರ ||

     ನೀನೊಂದು ರಮ್ಯ ಕಲ್ಪನೆ,
     ಹಾಗೆಯೇ ನೀನು ಹಸಿ ಹಸಿ
     ನಿಷ್ಕಾಮ ಪ್ರೀತಿ-ಬರೀ ಪ್ರೀತಿ ||

**
(ಈ ಕವಿತೆಯನ್ನು ಬರೆದಿರುವುದು 10-04-2007ರಂದು ದಂಟಕಲ್ಲಿನಲ್ಲಿ )
(ಕವಿತೆಗೆ ಭಾವಚಿತ್ರ ನೀಡಿದ ಅನುಷಾ ಎಂ. ಹೆಗಡೆಗೆ ಧನ್ಯವಾದಗಳು)

4 comments:

  1. Neere hage alwa...ellavu gupta. Chenagidyo. Tampanistu.

    ReplyDelete
  2. ಧುತ್ತೆಂದು ಹುಟ್ಟಿದ ಈ ನನ್ನ ಒಡಲಾಳದ ಬಯಕೆಗಳು..

    ಅಸಹನೆಯಂದ ಕದಲುತ್ತಿರುವ ಅತೃಪ್ತ ಸಮುದ್ರ

    ReplyDelete
  3. ಥ್ಯಾಂಕ್ಯೂ ದಿವ್ಯಾ, ಥ್ಯಾಂಕ್ಯೂ ಚಿನ್ಮಯ ಭಟ್ಟರೆ..
    ಪ್ರಿಯದರ್ಶಿ ಅವರೆ.. ಸಾಲುಗಳು ಚನ್ನಾಗಿವೆ... ಇಷ್ಟವಾದವು..

    ReplyDelete